Telegram Join My Telegram   WhatsApp Join My WhatsApp

ಅಂಗನವಾಡಿ ಜಾಬ್ ಅಲರ್ಟ್ 2026: 93 ಹುದ್ದೆ ಖಾಲಿ! ಎಕ್ಸಾಮ್ ಇಲ್ಲ – ಮಹಿಳೆಯರಿಗೆ ಸೂಪರ್ ಅವಕಾಶ

ಅಂಗನವಾಡಿ ಜಾಬ್ ಅಲರ್ಟ್ 2026: 93 ಹುದ್ದೆ ಖಾಲಿ! ಎಕ್ಸಾಮ್ ಇಲ್ಲ – ಮಹಿಳೆಯರಿಗೆ ಭರ್ಜರಿ ಚಾನ್ಸ್

ನಮಸ್ಕಾರ ಗೆಳತಿಯರೇ! 👋

ನೀವೇನಾದ್ರೂ ಮನೆಯ ಹತ್ತಿರ ಸರ್ಕಾರಿ ಕೆಲಸ ಹುಡುಕುತ್ತಿದ್ದೀರಾ? ಹಾಗಿದ್ರೆ ನಿಮಗೊಂದು ಸೂಪರ್ ಸುದ್ದಿ ಇದೆ. ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಈಗ ಒಟ್ಟು 93 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿ ಕರಿತಾಯಿದೆ.

ಇದ್ರಲ್ಲೇ ಖುಷಿಯ ವಿಷಯ ಏನಂದ್ರೆ, ಈ ಕೆಲಸಕ್ಕೆ ಯಾವುದೇ Written Exam ಇಲ್ಲ! ನಿಮ್ಮ ಶಾಲೆಯ ಮಾರ್ಕ್ಸ್ ಆಧಾರದಲ್ಲಿ ನೇರ ಆಯ್ಕೆ ಮಾಡ್ತಾರೆ. ಹೀಗಾಗಿ ಕಡಿಮೆ ಓದಿದ್ರೂ ಸರ್ಕಾರಿ ಕೆಲಸ ಪಡೆಯೋ ಅವಕಾಶ ಈಗ ನಿಮ್ಮ ಕೈಯಲ್ಲಿದೆ.

ಯಾವ ಯಾವ ಹುದ್ದೆಗಳು ಖಾಲಿ ಇವೆ?

ಈ ನೇಮಕಾತಿಯಲ್ಲಿ ಎರಡು ರೀತಿಯ ಪೋಸ್ಟ್‌ಗಳಿವೆ.

• 👉 ಅಂಗನವಾಡಿ ಕಾರ್ಯಕರ್ತೆ

ಮಕ್ಕಳ ಆರೈಕೆ, ಪೌಷ್ಟಿಕ ಆಹಾರ ವಿತರಣೆ, ಸೆಂಟರ್ ನೋಡಿಕೊಳ್ಳೋ ಜವಾಬ್ದಾರಿ ಇವರದು.

• 👉 ಅಂಗನವಾಡಿ ಸಹಾಯಕಿ

ಕಾರ್ಯಕರ್ತೆಯರಿಗೆ ಸಹಾಯ ಮಾಡೋದು ಹಾಗೂ ದೈನಂದಿನ ಕೆಲಸಗಳಲ್ಲಿ ಭಾಗವಹಿಸೋದು ಇವರ ಕೆಲಸ.

ವಿದ್ಯಾರ್ಹತೆ ಏನು ಬೇಕು?

✔ ಕಾರ್ಯಕರ್ತೆ ಹುದ್ದೆಗೆ

SSLC (10ನೇ ತರಗತಿ) ಪಾಸ್ ಆಗಿರಬೇಕು.

✔ ಸಹಾಯಕಿ ಹುದ್ದೆಗೆ

ಕನಿಷ್ಠ 9ನೇ ತರಗತಿ ಓದಿದ್ರೆ ಸಾಕು.

ಹೀಗಾಗಿ ಹೆಚ್ಚು ಓದಿಲ್ಲ ಅನ್ನೋ ಟೆನ್ಷನ್ ಬೇಡ.

ವಯಸ್ಸಿನ ಮಿತಿ

• ಕನಿಷ್ಠ ವಯಸ್ಸು – 19 ವರ್ಷ

• ಗರಿಷ್ಠ ವಯಸ್ಸು – 35 ವರ್ಷ

ಅಂಗವಿಕಲ ಮಹಿಳೆಯರಿಗೆ 45 ವರ್ಷದವರೆಗೆ ಅವಕಾಶ ಇದೆ.

ನಿಮ್ಮ ಊರಲ್ಲೇ ಕೆಲಸ ಸಿಗತ್ತೆ!

ಈ ನೇಮಕಾತಿಯ ದೊಡ್ಡ ಪ್ಲಸ್ ಪಾಯಿಂಟ್ ಏನಂದ್ರೆ, ನೀವು ಯಾವ ಅಂಗನವಾಡಿಗೆ ಅರ್ಜಿ ಹಾಕ್ತೀರೋ ಅದೇ ಗ್ರಾಮ ಅಥವಾ ವಾರ್ಡ್‌ನಲ್ಲಿ ಕನಿಷ್ಠ 3 ವರ್ಷ ವಾಸ ಮಾಡಿರ್ಬೇಕು.

ಅಂದ್ರೆ ದೂರ ಊರಿಗೆ ಹೋಗೋ ಅವಶ್ಯಕತೆ ಇಲ್ಲ. ಮನೆಯ ಹತ್ತಿರವೇ ಕೆಲಸ ಸಿಗೋ ಸಾಧ್ಯತೆ ಜಾಸ್ತಿ.

ಆಯ್ಕೆ ಹೇಗೆ ಮಾಡ್ತಾರೆ?

ಬಹಳ ಜನ ಕೇಳೋ ಪ್ರಶ್ನೆ ಇದೇ – “ಎಕ್ಸಾಮ್ ಇದೆಯಾ?”

ಉತ್ತರ – ಇಲ್ಲ! ❌

ಅಭ್ಯರ್ಥಿಗಳ 9ನೇ ಅಥವಾ 10ನೇ ತರಗತಿಯ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ತಯಾರಿಸಲಾಗುತ್ತದೆ.

ಹೆಚ್ಚು ಅಂಕ ಪಡೆದವರಿಗೆ ಮೊದಲ ಆದ್ಯತೆ ಸಿಗುತ್ತದೆ.

ಅದರ ಜೊತೆಗೆ:

• ವಿಧವೆಯರು

• ಆಶ್ರಯ ರಹಿತ ಮಹಿಳೆಯರು

• ದೇವದಾಸಿ ಪುತ್ರಿಯರು

• ಅಂಗವಿಕಲ ಮಹಿಳೆಯರು

ಇವರಿಗೆ ಸರ್ಕಾರದ ನಿಯಮದ ಪ್ರಕಾರ ವಿಶೇಷ ಆದ್ಯತೆ ಇರುತ್ತದೆ.

ಬೇಕಾಗುವ ಡಾಕ್ಯುಮೆಂಟ್ಸ್

ಅರ್ಜಿ ಹಾಕೋ ಮುಂಚೆ ಈ ದಾಖಲೆಗಳನ್ನು ರೆಡಿ ಇಟ್ಕೊಳ್ಳಿ:

• SSLC / 9ನೇ ತರಗತಿ ಮಾರ್ಕ್ಸ್ ಕಾರ್ಡ್

• ವಾಸಸ್ಥಳ ಪ್ರಮಾಣ ಪತ್ರ

• ಜಾತಿ & ಆದಾಯ ಪ್ರಮಾಣ ಪತ್ರ

• ಪಾಸ್‌ಪೋರ್ಟ್ ಸೈಜ್ ಫೋಟೋ

• ಸಹಿ (Signature)

• ವಿಧವೆ / ಅಂಗವಿಕಲ ಪ್ರಮಾಣ ಪತ್ರ (ಅನ್ವಯಿಸಿದರೆ)

ಆನ್‌ಲೈನ್‌ನಲ್ಲಿ ಅರ್ಜಿ ಹಾಕೋದು ಹೇಗೆ?

Step 1:

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

karnatakawcd.karnataka.gov.in⁠

Step 2:

ನಿಮ್ಮ ಜಿಲ್ಲೆ ಆಯ್ಕೆ ಮಾಡಿ.

Step 3:

ಅರ್ಜಿಯಲ್ಲಿ ಹೆಸರು, ವಿಳಾಸ, ವಿದ್ಯಾಭ್ಯಾಸ ಮಾಹಿತಿ ಸರಿಯಾಗಿ ನಮೂದಿಸಿ.

Step 4:

ಡಾಕ್ಯುಮೆಂಟ್ಸ್ ಅಪ್‌ಲೋಡ್ ಮಾಡಿ.

Step 5:

Submit ಕೊಟ್ಟು Application Copy ಸೇವ್ ಮಾಡ್ಕೊಳ್ಳಿ.

ಲಾಸ್ಟ್ ಡೇಟ್ ಯಾವಾಗ?

ಜಿಲ್ಲಾವಾರು ಕೊನೆಯ ದಿನಾಂಕ ಬೇರೆ ಬೇರೆ ಇರೋದರಿಂದ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಚೆಕ್ ಮಾಡೋದು ಉತ್ತಮ.

ಮೇ 2026 ಕೊನೆಯ ವಾರದವರೆಗೆ ಅವಕಾಶ ಇರೋ ಸಾಧ್ಯತೆ ಇದೆ.

ಮೋಸಗಾರರಿಂದ ಜಾಗ್ರತೆ!

ಯಾರಾದ್ರೂ “ಜಾಬ್ ಕೊಡಿಸ್ತೀವಿ” ಅಂತ ದುಡ್ಡು ಕೇಳಿದ್ರೆ ನಂಬಬೇಡಿ. ಈ ನೇಮಕಾತಿಗೆ ಯಾವುದೇ Application Fee ಇಲ್ಲ.

ಸರ್ಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿ ಸಲ್ಲಿಸಿ.

ಕೊನೆಯ ಮಾತು

ಕಡಿಮೆ ಓದಿದ ಮಹಿಳೆಯರಿಗೂ ಸರ್ಕಾರಿ ಕೆಲಸ ಸಿಗೋದು ದೊಡ್ಡ ವಿಷಯ. ಮನೆಯ ಹತ್ತಿರವೇ ಕೆಲಸ ಮಾಡೋ ಅವಕಾಶ ಸಿಕ್ಕಿದ್ರೆ ಅದನ್ನ ಮಿಸ್ ಮಾಡ್ಕೊಳ್ಬೇಡಿ.

ಈ ಮಾಹಿತಿ ಉಪಯೋಗ ಆಯ್ತು ಅಂದ್ರೆ ನಿಮ್ಮ ಫ್ರೆಂಡ್ಸ್ ಮತ್ತು ವಾಟ್ಸಾಪ್ ಗ್ರೂಪ್‌ಗಳಿಗೆ ಶೇರ್ ಮಾಡಿ ❤️

Leave a Comment