ಹಲೋ ಸ್ನೇಹಿತರೇ, ಹೇಗಿದ್ದೀರಾ?
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ, ವಾಟ್ಸಾಪ್ ಸ್ಟೇಟಸ್ಗಳಲ್ಲಿ, ಯೂಟ್ಯೂಬ್ ವಿಡಿಯೋಗಳಲ್ಲಿ ಒಂದು ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅದೇನಂದ್ರೆ —
“ಕರ್ನಾಟಕದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡ್ತಾರಂತೆ!”
ಈ ಸುದ್ದಿ ನೋಡಿದ ತಕ್ಷಣ ಮಕ್ಕಳಿಗಿಂತ ಹೆಚ್ಚು ಟೆನ್ಷನ್ ಬಂದಿರೋದು ಪಕ್ಕ ಪೋಷಕರಿಗೂ, ರೀಲ್ಸ್ ಮಾಡುವ ಯುವಕರಿಗೂ, ಕಂಟೆಂಟ್ ಕ್ರಿಯೇಟರ್ಸ್ಗೂ.
“ಇನ್ಸ್ಟಾಗ್ರಾಮ್ ಬಳಸೋಕಾಗೋದಿಲ್ಲವಾ?”, “ಯೂಟ್ಯೂಬ್ ಕೂಡ ಬ್ಯಾನ್ ಆಗುತ್ತಾ?”, “ಮೊಬೈಲ್ ಸಂಪೂರ್ಣವಾಗಿ ತೆಗೆದುಕೊಳ್ಳ್ತಾರಾ?” ಅನ್ನೋ ಪ್ರಶ್ನೆಗಳು ಎಲ್ಲರಲ್ಲೂ ಇವಾಗ ಶುರುವಾಗಿದೆ.
ಆದ್ರೆ ನಿಜವಾಗಿಯೂ ಸರ್ಕಾರ ಅಂಥ ನಿರ್ಧಾರ ತೆಗೆದುಕೊಂಡಿದೆಯಾ? ಅಥವಾ ಇದು ಸೋಶಿಯಲ್ ಮೀಡಿಯಾದ ಮತ್ತೊಂದು ಓವರ್ ಹೈಪ್ ನ್ಯೂಸ್ ಆ?
ಇವತ್ತಿನ ಈ ಬ್ಲಾಗ್ನಲ್ಲಿ ಸಂಪೂರ್ಣ ವಿಷಯವನ್ನು ಸರಳ ಕನ್ನಡದಲ್ಲಿ ತಿಳಿಯೋಣ.
ಹಾಗಾದ್ರೆ ಬಜೆಟ್ನಲ್ಲಿ ಸರ್ಕಾರ ಹೇಳಿದ್ದೇನು?
ಹೌದು, ಈ ವಿಷಯವನ್ನು ಕರ್ನಾಟಕ ಸರ್ಕಾರ ಅಧಿಕೃತವಾಗಿ ಪ್ರಸ್ತಾಪ ಮಾಡಿರುವುದು ನಿಜ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ನಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಹವ್ಯಾಸ ಮತ್ತು ಸೋಶಿಯಲ್ ಮೀಡಿಯಾ ಅಡಿಕ್ಷನ್ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ.
16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆಗೆ ನಿಯಂತ್ರಣ ತರೋದ್ರ ಬಗ್ಗೆ ಸರ್ಕಾರ ಯೋಚನೆ ಮಾಡ್ತಿದೆ ಅನ್ನೋ ಮಾಹಿತಿ ನೀಡಿದ್ದಾರೆ.
ಇದಕ್ಕೆ ಕಾರಣವೂ ಇದೆ.
ಇವತ್ತಿನ ಮಕ್ಕಳ ಜೀವನದಲ್ಲಿ ಮೊಬೈಲ್ ಅಂದ್ರೆ ಆಟಿಕೆಗಿಂತ ದೊಡ್ಡ ವಿಷಯ ಆಗಿಬಿಟ್ಟಿದೆ.
ಮಕ್ಕಳಿಗೆ ಸೋಶಿಯಲ್ ಮೀಡಿಯಾ ಇಷ್ಟು ದೊಡ್ಡ ಸಮಸ್ಯೆಯಾಗಿದೆಯಾ?
ನಾವು ಸ್ವಲ್ಪ ಗಮನಿಸಿದ್ರೆ ನಿಜ್ವಾಗ್ಲೂ ಉತ್ತರ ಸಿಕ್ಕೇ ಸಿಗುತ್ತೆ.
ಈಗಿನ ಮಕ್ಕಳ ದಿನಚರಿ ಹೆಂಗೆ ಇರುತ್ತೆ ಗೊತ್ತಾ?
• ಬೆಳಗ್ಗೆ ಎದ್ದ ಕೂಡ್ಲೇ ಮೊಬೈಲ್
• ಊಟ ಮಾಡ್ಬೇಕಾದ್ರೆ ಯುಟ್ಯೂಬ್ ನೋಡೋದು
• ಓದ್ಬೇಕಾದ್ರೆ ರಿಲೀಸ್ ನೋಡೋದು
• ರಾತ್ರಿ ಮಲಗೋ ಮುಂಚೆ ಬರಿ ಇನ್ಸ್ಟಾಗ್ರಾಮ್ ಸ್ಕ್ರೋಲ್ ಮಾಡೋದು
ಇದರಿಂದ ನಿಧಾನವಾಗಿ ಏನಾಗ್ತಿದೆ ಅಂದ್ರೆ ಮಕ್ಕಳ ಗಮನ ಓದಿನ ಮೇಲೆ ಪೂರ್ತಿ ಕಡಿಮೆಯಾಗುತ್ತಿದೆ.
ಒಮ್ಮೆ ರೀಲ್ಸ್ ನೋಡೋದು ಶುರು ಆದ್ಮೇಲೆ ಗಂಟೆಗಟ್ಟಲೆ ಸಮಯ ಹೋದ್ರೂ ಸ್ವಲ್ಪನೂ ಗೊತ್ತಾಗಲ್ಲ
ಏಕಾಗ್ರತೆ ಕುಸಿತ
ಆಗಿನ ಮಕ್ಕಳು ಒಂದು ವಿಷಯದ ಮೇಲೆ ಗಂಟೆಗಟ್ಟಲೆ ಗಮನ ಕೊಡ್ತಿದ್ರು.
ಈಗ 20 ಸೆಕೆಂಡ್ ರೀಲ್ಸ್ಗೆ ಅಡ್ಜಸ್ಟ್ ಆಗಿರೋ ಮನಸ್ಸು ಪುಸ್ತಕ ಓದೋದಕ್ಕೆ ಬೇಗ ಬೇಸರಪಡ್ತಿದೆ.
ಮಾನಸಿಕ ಒತ್ತಡ
ಸೋಶಿಯಲ್ ಮೀಡಿಯಾದಲ್ಲಿ “ಲೈಕ್ಸ್”, “ಫಾಲೋವರ್ಸ್”, “ಕಮೆಂಟ್ಸ್” ಇವೆಲ್ಲ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ.
• ಈಗಿನ ಮಕ್ಕಳು ವಿಡಿಯೋಗೆ ಲೈಕ್ಸ್ ಕಡಿಮೆ ಬಂದ್ರೆ ಬೇಸರ
• ಸ್ನೇಹಿತನಿಗಿಂತ ನನಗೆ ಕಡಿಮೆ ಫಾಲೋವರ್ಸ್ ಇದಾರೆ ಅನ್ನೋ ಹೋಲಿಕೆ
• ಕೆಲವೊಮ್ಮೆ ಆನ್ಲೈನ್ ಟ್ರೋಲ್ ಮತ್ತು ಬುಲ್ಲಿಂಗ್
ಇವು ಮಕ್ಕಳ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತೆ.
ಇದರಿಂದ ಹೊರಗಡೆ ಮಕ್ಕಳು ಆಟ ಆಡುವುದನ್ನು ಬಿಟ್ಟಿದ್ದಾರೆ
ಹಿಂದೆ ಸಂಜೆ ಆಯ್ತು ಅಂದ್ರೆ ಮಕ್ಕಳು ಮೈದಾನದಲ್ಲಿ ಕಾಣಿಸ್ತಿದ್ರು.
ಕ್ರಿಕೆಟ್, ಲಗ್ಗೋರಿ, ಕಬ್ಬಡ್ಡಿ, ಕಣ್ಣಾಮುಚ್ಚಾಲೆ — ಏನಾದ್ರೂ ಆಟ ಆಡ್ತಿದ್ರು.
ಆದ್ರೆ ಈಗ ಹೆಚ್ಚಿನ ಮಕ್ಕಳು ಮನೆಯೊಳಗೆ ಕೂತು ಮೊಬೈಲ್ ನೋಡ್ತಾ ಸಮಯ ವೆಸ್ಟ್ ಮಾಡ್ತಾರೆ .
ಇದರಿಂದ ದೈಹಿಕ ಆರೋಗ್ಯ ಕೂಡ ಹಾಳಾಗ್ತಿದೆ.
ಸರ್ಕಾರದ ಉದ್ದೇಶ ಏನು?
ಸರ್ಕಾರ ಮಕ್ಕಳಿಂದ ಮೊಬೈಲ್ ಕಿತ್ತುಕೊಳ್ಳೋಕೆ ಯತ್ನ ಮಾಡ್ತಿಲ್ಲ.
ಆದ್ರೆ ಒಂದು ಮಿತಿಯೊಳಗೆ ಬಳಕೆ ಇರಬೇಕು ಅನ್ನೋದು ಅವರ ಮುಖ್ಯ ಉದ್ದೇಶ.
ಇತ್ತೀಚೆಗೆ “ಮೊಬೈಲ್ ಬಿಡಿ, ಪುಸ್ತಕ ಹಿಡಿ” ಅನ್ನೋ ಅಭಿಯಾನ ಕೂಡ ಸರ್ಕಾರ ಆರಂಭಿಸಿತ್ತು.
ಅದೇ ರೀತಿಯಲ್ಲಿ ಮಕ್ಕಳಿಗೆ ಡಿಜಿಟಲ್ ಶಿಸ್ತು ತರೋ ಯೋಚನೆ ಈಗ ನಡೆಯುತ್ತಿದೆ.
ಸರ್ಕಾರದ ದೃಷ್ಟಿಯಲ್ಲಿ ಇದು ಒಂದು ಸಾಮಾಜಿಕ ಮತ್ತು ಮಾನಸಿಕ ಆರೋಗ್ಯದ ವಿಷಯ.
ಈಗಲೇ ಬ್ಯಾನ್ ಆಗಿದೆಯಾ?
ಇಲ್ಲ.
ಇದು ಬಹಳ ಮುಖ್ಯವಾದ ವಿಷಯ.
ಇನ್ನೂ ಯಾವುದೇ ಅಂತಿಮ ಕಾನೂನು ಜಾರಿಗೆ ಬಂದಿಲ್ಲ.
ಸದ್ಯಕ್ಕೆ ಸರ್ಕಾರ ಇದರ ಬಗ್ಗೆ ಅಧ್ಯಯನ ಮಾಡ್ತಿದೆ ಅಷ್ಟೇ.
ವಿಶೇಷ ಸಮಿತಿ ರಚನೆ
ಐಟಿ ಮತ್ತು ಶಿಕ್ಷಣ ಇಲಾಖೆ ಸೇರಿ ಒಂದು ಸಮಿತಿಯನ್ನು ರಚಿಸಲಾಗಿದೆ.
ಈ ನಿಯಮವನ್ನು ಹೇಗೆ ಜಾರಿಗೊಳಿಸಬಹುದು ಅನ್ನೋದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಬೇರೆ ದೇಶಗಳ ಮಾದರಿ
ಆಸ್ಟ್ರೇಲಿಯಾ ಸೇರಿದಂತೆ ಕೆಲವು ದೇಶಗಳಲ್ಲಿ ಮಕ್ಕಳ ಸೋಶಿಯಲ್ ಮೀಡಿಯಾ ಬಳಕೆಗೆ ನಿಯಂತ್ರಣ ತರೋ ಪ್ರಯತ್ನಗಳು ಮಾಡ್ತೀವಿ.
ಅಲ್ಲಿನ ನಿಯಮಗಳು ಹೇಗೆ ಕೆಲಸ ಮಾಡ್ತಿವೆ?
ಜನರು ಅದನ್ನು ಹೇಗೆ ಸ್ವೀಕರಿಸಿದ್ದಾರೆ?
ತಾಂತ್ರಿಕವಾಗಿ ಯಾವ ಸವಾಲುಗಳು ಬಂದಿವೆ? ಅನ್ನೋದನ್ನ ಕರ್ನಾಟಕ ಸರ್ಕಾರ ಅಧ್ಯಯನ ಮಾಡ್ತಿದೆ.
ಸಾರ್ವಜನಿಕರ ಅಭಿಪ್ರಾಯ
ಪೋಷಕರು, ಶಿಕ್ಷಕರು, ಮನಶ್ಶಾಸ್ತ್ರಜ್ಞರು ಮತ್ತು ಟೆಕ್ ತಜ್ಞರ ಅಭಿಪ್ರಾಯ ಪಡೆದುಕೊಂಡು ಮಾತ್ರ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಅಂದ್ರೆ ಈಗಲೇ ಹೆದರೋ ಅಗತ್ಯ ಇಲ್ಲ.
ಈ ನಿಯಮ ಜಾರಿಗೆ ತರುವುದು ಸುಲಭನಾ?
ನಿಜ ಹೇಳ್ಬೇಕಂದ್ರೆ ಇದು ತುಂಬಾ ಕಷ್ಟದ ಕೆಲಸ.
ಯಾಕಂದ್ರೆ ಸೋಶಿಯಲ್ ಮೀಡಿಯಾ ಅನ್ನೋದು ಕೇವಲ ಒಂದು ಆಪ್ ಅಲ್ಲ.
ಇದು ಇಡೀ ಇಂಟರ್ನೆಟ್ ಜಗತ್ತಿನ ಭಾಗ.
ವಯಸ್ಸಿನ ಪರಿಶೀಲನೆ ಹೇಗೆ ಮಾಡುತ್ತಾರೆ?
ಒಬ್ಬ ಮಗು ಇನ್ಸ್ಟಾಗ್ರಾಮ್ ಅಕೌಂಟ್ ತೆರೆಯುವಾಗ ತನ್ನ ವಯಸ್ಸು 18 ಅಂತ ಹಾಕಿದ್ರೆ ಅದನ್ನು ಯಾರು ಚೆಕ್ ಮಾಡ್ತಾರೆ?
ಅದಕ್ಕಾಗಿ ಆಧಾರ್ ಬೇಕಾ?
ಮೊಬೈಲ್ ನಂಬರ್ ಲಿಂಕ್ ಮಾಡಬೇಕಾ?
ಅಥವಾ ಫೇಸ್ ಸ್ಕ್ಯಾನ್ ಮಾಡಬೇಕಾ?
ಇವು ದೊಡ್ಡ ಪ್ರಶ್ನೆಗಳು.
ಪೋಷಕರ ಮೊಬೈಲ್ ಬಳಕೆ
ಒಂದು ವೇಳೆ ಮಕ್ಕಳ ಅಕೌಂಟ್ ಬ್ಯಾನ್ ಮಾಡಿದ್ರೂ, ಅವರು ಮನೆಯವರ ಮೊಬೈಲ್ನಲ್ಲಿ ನೋಡಬಹುದು.
ಹಾಗಾದ್ರೆ ಅದನ್ನು ತಡೆಯೋದು ಹೇಗೆ?
ಕಾನೂನು ಸಂಬಂಧಿತ ಸಮಸ್ಯೆ
ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾ ನಿಯಮಗಳು ಸಾಮಾನ್ಯವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ.
ಹಾಗಾಗಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣವಾಗಿ ಈ ನಿಯಮ ಜಾರಿಗೆ ತರುವ ಅಧಿಕಾರ ಎಷ್ಟಿದೆ ಅನ್ನೋ ಚರ್ಚೆಯೂ ನಡೆಯುತ್ತಿದೆ.
ಕಂಟೆಂಟ್ ಕ್ರಿಯೇಟರ್ಸ್ಗೆ ಪರಿಣಾಮ ಬಿರುತ್ತಾ?
ಈ ಸುದ್ದಿ ಕೇಳಿ ಹಲವಾರು ಯೂಟ್ಯೂಬರ್ಸ್ ಮತ್ತು ರೀಲ್ಸ್ ಕ್ರಿಯೇಟರ್ಸ್ಗೆ ಟೆನ್ಷನ್ ಶುರುವಾಗಿದೆ.
“ಮಕ್ಕಳು ನೋಡೋದು ಕಡಿಮೆಯಾದ್ರೆ ವ್ಯೂಸ್ ಕಡಿಮೆಯಾಗುತ್ತಾ?” ಅನ್ನೋ ಪ್ರಶ್ನೆ ಸಹಜ.
ಆದ್ರೆ ವಾಸ್ತವದಲ್ಲಿ ಒಳ್ಳೆಯ ಕಂಟೆಂಟ್ ಯಾವಾಗಲೂ ಜನ ನೋಡ್ತಾರೆ.
ಬದಲಾಗಿ ಮಕ್ಕಳಿಗೆ ಉಪಯುಕ್ತ, ಶಿಕ್ಷಣಾತ್ಮಕ, ಕ್ರಿಯೇಟಿವ್ ಕಂಟೆಂಟ್ ಮಾಡುವವರಿಗೆ ಇದು ಒಳ್ಳೆಯ ಅವಕಾಶ ಕೂಡ ಆಗಬಹುದು.
ಪೋಷಕರು ಏನು ಮಾಡಬೇಕು?
ಕಾನೂನು ಬರೋವರೆಗೆ ಕಾಯೋ ಅವಶ್ಯಕತೆ ಇಲ್ಲ.
ಮನೆಯಲ್ಲಿ ನಾವು ಕೆಲವು ಸರಳ ನಿಯಮಗಳನ್ನು ಇಂದಿನಿಂದಲೇ ಪಾಲಿಸಬಹುದು.
ಸ್ಕ್ರೀನ್ ಟೈಮ್ಗೆ ಲಿಮಿಟ್ ಹಾಕಿ
ದಿನಕ್ಕೆ ಎಷ್ಟು ಸಮಯ ಮೊಬೈಲ್ ಬಳಸಬೇಕು ಅನ್ನೋದನ್ನು ಫಿಕ್ಸ್ ಮಾಡಿ.
ಓದುವುದಕ್ಕೆ ಮತ್ತೆ ಆಟವಾಡಕ್ಕೆ ಸಮಯ ಕೊಡಬೇಕು
ಮಕ್ಕಳನ್ನು ಹೊರಗೆ ಆಟ ಆಡಲು ಪ್ರೋತ್ಸಾಹಿಸಿ.
ಪುಸ್ತಕ ಓದುವ ಅಭ್ಯಾಸ ಬೆಳೆಸಿ.
ಪೇರೆಂಟಲ್ ಕಂಟ್ರೋಲ್ ಬಳಸಿ
ಯೂಟ್ಯೂಬ್, ಇನ್ಸ್ಟಾಗ್ರಾಮ್, ಗೂಗಲ್ ಫ್ಯಾಮಿಲಿ ಲಿಂಕ್ ಮುಂತಾದ ಆಪ್ಸ್ನಲ್ಲಿ ಮಕ್ಕಳ ಬಳಕೆಯನ್ನು ನಿಯಂತ್ರಿಸಬಹುದು.
ಮಕ್ಕಳ ಜೊತೆ ಮಾತಡ್ರಿ
ಬೈಯೋದು ಅಥವಾ ಫೋನ್ ಕಿತ್ತುಕೊಳ್ಳೋದು ಮಾತ್ರ ಪರಿಹಾರ ಅಲ್ಲ.
ಅವರಿಗೆ ಸೋಶಿಯಲ್ ಮೀಡಿಯಾದ ಒಳ್ಳೆಯದು-ಕೆಟ್ಟದ್ದು ಎರಡನ್ನೂ ಅರ್ಥ ಮಾಡಿಸೋ ಕೆಲಸ ಮಾಡಿ.
ಕೊನೆಯ ಮಾತು
16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡುವ ಆಲೋಚನೆ ಒಂದು ದೊಡ್ಡ ಚರ್ಚೆಯ ವಿಷಯ ಆಗಿದೆ.
ಕೆಲವರಿಗೆ ಇದು ಒಳ್ಳೆಯ ನಿರ್ಧಾರ ಅನಿಸಬಹುದು.
ಇನ್ನೂ ಕೆಲವರಿಗೆ ಇದು practically ಸಾಧ್ಯವಿಲ್ಲ ಅನ್ನಿಸಬಹುದು.
ಆದ್ರೆ ಒಂದು ವಿಷಯ ಮಾತ್ರ ಸತ್ಯ —
ಮಕ್ಕಳ ಜೀವನದಲ್ಲಿ ಮೊಬೈಲ್ ಬಳಕೆ ಮಿತಿಯೊಳಗೆ ಇರ್ಬೇಕು ಅನ್ನೋದರ ಬಗ್ಗೆ ಈಗ ಸಮಾಜ ಗಂಭೀರವಾಗಿ ಯೋಚನೆ ಮಾಡ್ತಿದೆ.
ಸರ್ಕಾರ ಏನು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದು ಮುಂದೆ ಗೊತ್ತಾಗುತ್ತೆ.
ಆದ್ರೆ ಪೋಷಕರಾಗಿ ಮತ್ತು ಸಮಾಜದ ಭಾಗವಾಗಿ ಮಕ್ಕಳ ಡಿಜಿಟಲ್ ಭವಿಷ್ಯವನ್ನು ಸುರಕ್ಷಿತ ಮಾಡೋ ಜವಾಬ್ದಾರಿ ನಮ್ಮ ಎಲ್ಲರ ಮೇಲಿದೆ.
ಹಾಗಾದ್ರೆ ನಿಮಗೆ ಏನು ಅನಿಸುತ್ತದೆ?
16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಯಂತ್ರಣ ಬೇಕಾ?
ಅಥವಾ ಇದು ಜಾರಿಗೆ ಬರೋದೇ ಕಷ್ಟನಾ?
ನಿಮ್ಮ ಅಭಿಪ್ರಾಯವನ್ನು ಕಮೆಂಟ್ನಲ್ಲಿ ತಪ್ಪದೇ ತಿಳಿಸಿ!